Index   ವಚನ - 134    Search  
 
ಧರೆಯಗಲದ ಜಲಕ್ಕೆ ಕರಿಯ ನೂಲಿನ ಜಾಲ, ಕರಿಯ ಕಬ್ಬಿಲ ಹೊಕ್ಕು ಸೇದುತ್ತಿರಲು, ಕರದ ಕೈಯಲಿ ಗಾಳ, ಸೂಕ್ಷ್ಮ ವಿಚಾರದಿಂದ ಅರಿದುಕೊಂಬಡೆ ಗಾಳ ಹೊರಗಾಯಿತ್ತು. ಹರಿವ ಜಲಗಳು ಬತ್ತಿ ಬೇಸಿಗೆ ಉಷ್ಣವು ತೋರಿ ಬಿಳಿಯ ಮಳಲಲ್ಲಿಗಲ್ಲಿಗೆ ಕಾಣಬರಲು, ಕರಿಯ ಕಬ್ಬಿಲ ಬಂದು, ಏರಿಯ ಮೆಟ್ಟಿ ನೋಡಿ ಕಾಣದೆ ಮರಳಿ, ಜಾಲವ ಹೊತ್ತುಕೊಂಡು ಹೋಹಾಗ, ಹೊಂಗರಿಯ ಬಿಲ್ಲಕೋಲನೊಂದು ಕೈಯಲಿ ಹಿಡಿದು, ಒಂದು ಕೈಯಲಿ ಬಿದಿರಕ್ಕಿವಿಡಿದು, ದಂಗಟನ ಪುಣುಜೆಯರು ಮುಂದೆ ಬಂದಾಡಲು, ಕಂಗಳ ಮುತ್ತು ಸಡಿಲಿ ಪಾದದ ಮೇಲೆ ಬೀಳಲು, ಅಂಗಯ್ಯ ಒಳಗೊಂದು ಅರಿತಲೆ ಮೂಡಿರಲು ದಂಗಟನ ಹೊತ್ತುಕೊಂಡಾಡುತ್ತಿರಲು ಶೃಂಗಾರ ಸಯವಾಯಿತ್ತು, ಕೂಡಲಚೆನ್ನಸಂಗಯ್ಯನಲ್ಲಿ ಭಕ್ತ್ಯಂಗನೆಯ ನಾವು ಕಂಡೆವಯ್ಯಾ.