ಬ್ರಹ್ಮನನಾರಾಧಿಸಿ ನಿರ್ಮೂಲವಾದರಯ್ಯ,
ವಿಷ್ಣುವನಾರಾಧಿಸಿ ಭವಭವಕ್ಕೆ ಬಂದರಯ್ಯ,
ಭೈರವನನಾರಾಧಿಸಿ ಬಾಹಿರವೋದರಯ್ಯಾ,
ಮೈಲಾರನನಾರಾಧಿಸಿ ಕುರುಳು ಬೆರಳ ಕಡಿಸಿಕೊಂಡು
ನಾಯಾಗಿ ಬಗಳುತಿಪ್ಪರು.
ಜಿನನನಾರಾಧಿಸಿ ಲಜ್ಜೆನಾಚಿಕೆ ದೊರೆದರು ನೋಡಾ,
ನಮ್ಮ ಕೂಡಲಚೆನ್ನಸಂಗಯ್ಯನನಾರಾಧಿಸಿ ದೇವಾ,
ಭಕ್ತರೆಂದೆನಿಸಿಕೊಂಬರು ನೋಡಯ್ಯಾ.
Art
Manuscript
Music
Courtesy:
Transliteration
Brahmananārādhisi nirmūlavādarayya,
viṣṇuvanārādhisi bhavabhavakke bandarayya,
bhairavananārādhisi bāhiravōdarayyā,
mailārananārādhisi kuruḷu beraḷa kaḍisikoṇḍu
nāyāgi bagaḷutipparu.
Jinananārādhisi lajjenācike doredaru nōḍā,
nam'ma kūḍalacennasaṅgayyananārādhisi dēvā,
bhaktarendenisikombaru nōḍayyā.
ಸ್ಥಲ -
ಮಾಹೇಶ್ವರನ ಜ್ಞಾನಿಸ್ಥಲ