Index   ವಚನ - 207    Search  
 
ಅರವತ್ತುನಾಲ್ಕು ಶೀಲದಲ್ಲಿ ನಡೆದು ತೋರಿದನೆನಗೆ ಬಸವಣ್ಣ ನೋಡಯ್ಯಾ. ಆ ನಡೆಯನು ಹಿಡಿದು ಬಿಡದೆ ನಡೆವೆನು, ಲಿಂಗ ಜಂಗಮ ಸಾಕ್ಷಿಯಾಗಿ. ಈ ನಡೆಯನು ಹಿಡಿದು ನಡೆವೆನು, ಪ್ರಸಾದ ಸಾಕ್ಷಿಯಾಗಿ. ದೃಢದಿಂದ ಹಿಡಿದು ಬಿಡದೆ ಕಡೆಮುಟ್ಟಿ ಸಲಿಸುವೆ, ಕೂಡಲಚೆನ್ನಸಂಗಮದೇವಾ.