Index   ವಚನ - 223    Search  
 
ಉದಯ ಕಾಲ ಮಜ್ಜನಕ್ಕೆರೆಯಲಾಗಿ, ಉತ್ಪತ್ತಿ ಕಾಲಕರ್ಮ ಕೆಡಲಿಕ್ಕಾಗಿ ಮಧ್ಯಾಹ್ನಕಾಲ ಮಜ್ಜನಕ್ಕೆರೆಯಲಾಗಿ, ಸ್ಥಿತಿಕಾಲಕರ್ಮ ಕೆಡಲಿಕ್ಕಾಗಿ, ಅಸ್ತಮಾನಕಾಲ ಮಜ್ಜನಕ್ಕೆರೆಯಲಾಗಿ, ಲಯಕಾಲ ಕರ್ಮವು ಕೆಡಲಿಕ್ಕಾಗಿ, ಹೊತ್ತಾರಿನ ಪೂಜೆ ಬ್ರಹ್ಮಂಗೆ, ಮಧ್ಯಾಹ್ನದ ಪೂಜೆ ವಿಷ್ಣುವಿಂಗೆ, ಅಸ್ತಮಾನದ ಪೂಜೆ ರುದ್ರಂಗೆ. ಇಂತೀ ತ್ರಿವಿಧಕಾಲ ಮಜ್ಜನಕ್ಕೆರೆದವ ಭವಭಾರಿ ಇಂತು ತ್ರಿವಿಧಕಾಲ ನಾಸ್ತಿಯಾಗಿ ಮಜ್ಜಕ್ಕೆರೆಯಬಲ್ಲನಾಗಿ ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣ ಭವಕ್ಕೆ ಬಾರ.