Index   ವಚನ - 233    Search  
 
ಗುರುಕಾರುಣ್ಯವ ಪಡೆದ ಬಳಿಕ ಕೂಡೆ ಭವಿಗಳ ಬಿಡಲೇಬೇಕು. ಲಿಂಗಸಂಗಿಯಾದ ಬಳಿಕ ದುಸ್ಸಂಗ ಹಿಂಗಲೇಬೇಕು. ಅರ್ಪಿತವಲ್ಲದೆ ಬಾಯಿದೆರೆಯೆನೆಂದರೆ ಸರ್ವಭವಿಪಾಕವ ಬಿಡಬೇಕು. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಶಿವಾಚಾರಸಂಪತ್ತಿಲ್ಲದವರ ಮನೆಯ ಹುಗಲಾgದು.