Index   ವಚನ - 256    Search  
 
ಪುಷ್ಪ ಅಗ್ಘವಣಿ ಓಗರ ಅಡಿಗಡಿಗೆ ಮೀಸಲಾಗಿರಬೇಕೆಂಬುದು ಶೀಲವೆ, ಪಂಚೇಂದ್ರಿಯ ಸಪ್ತಧಾತು ಅರಿಷಡ್ವರ್ಗವನತಿಗಳೆಯದನ್ನಕ್ಕ? ಲಿಂಗ ಜಂಗಮ ಪ್ರಸಾದದಲ್ಲಿ ನಿಸ್ಸೂತಕವಾದಡೆ ಆತನೇ ಪ್ರಸಾದಿ, ಕೂಡಲಚೆನ್ನಸಂಗಮದೇವಾ.