Index   ವಚನ - 280    Search  
 
ಪಾದೋದಕವಿಡಿದು ಪಾದೋದಕವನುದ್ಧರಿಸುವ ಕ್ರಮಭೇದವೇನಯ್ಯಾ? ಲಿಂಗೋದಕವಿಡಿದು ಲಿಂಗೋದಕವನುದ್ಧರಿಸುವ ಕ್ರಮಭೇದವೇನಯ್ಯಾ? ಪ್ರಸಾದೋದಕವಿಡಿದು ಪ್ರಸಾದೋದಕವನುದ್ಧರಿಸುವ ಕ್ರಮಭೇದವ ಭೇದಿಸಿ ಗ್ರಹಿಸುವ ಕೂಡಲಚೆನ್ನಸಂಗಾ ನಿಮ್ಮ ಶರಣ.