Index   ವಚನ - 314    Search  
 
ಆಯತ ಸ್ವಾಯತ ಸನ್ನಿಹಿತವ ಅನಾಯತಗಳು ಮುಟ್ಟಲಮ್ಮವು ನೋಡಾ. ಕಂಗಳ ಕೈಗಳಲರ್ಪಿಸುವ, ಶ್ರೋತ್ರದ ಕೈಗಳಲರ್ಪಿಸುವ [ತ್ವಕ್ಕಿನ] ಕೈಗಳಲರ್ಪಿಸುವ, ಜಿಹ್ವೆಯ ಕೈಗಳಲರ್ಪಿಸುವ, ತನುವಿನ ಕೈಗಳಲರ್ಪಿಸುವ, ಮನದ ಕೈಗಳಲರ್ಪಿಸುವ, ಕೈಗಳ ಕೈಯಲರ್ಪಿಸುವ. ಅಲ್ಲಲ್ಲಿ ತಾಗಿದ ಸುಖವನಲ್ಲಲ್ಲಿ ಲಿಂಗಾರ್ಪಿತವ ಮಾಡುವನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಆತ ಮಹಾಪ್ರಸಾದಿ.