ಕಾಲಚಕ್ರ ಕರ್ಮಚಕ್ರ ನಾದಚಕ್ರ
ಬಿಂದುಚಕ್ರ-ಈ ನಾಲ್ಕು ಚಕ್ರವ
ಸಾಧಿಸಿಹೆವೆಂಬ ಹಿರಿಯರೆಲ್ಲ
ಕೆಟ್ಟು ಹೋದರು ನೋಡಾ.
ಕಾಲಚಕ್ರವು ಘ್ರಾಣದಿಂದ ನಡೆವುದು,
ಕರ್ಮಚಕ್ರವು ನಯನದಿಂದ ನಡೆವುದು,
ನಾದಚಕ್ರವು ಶ್ರೋತ್ರದಿಂದ ನಡೆವುದು,
ಬಿಂದುಚಕ್ರವು ಜಿಹ್ವೆಯಿಂದೆ ನಡೆವುದು.
ಕಾಲಚಕ್ರ ಗುರುಕ್ಷೇತ್ರ, ಕರ್ಮಚಕ್ರ ಲಿಂಗಕ್ಷೇತ್ರ,
ನಾದಚಕ್ರ ಜಂಗಮಕ್ಷೇತ್ರ, ಬಿಂದುಚಕ್ರ ಪ್ರಸಾದಕ್ಷೇತ್ರ.
ಈ ನಾಲ್ಕರ ಮನದ ಕೊನೆಯ ಮೊನೆಯ ಮೇಲೆ
ಸಿಂಹಾಸನನಾಗಿಪ್ಪ ನಮ್ಮ ಕೂಡಲಚೆನ್ನಸಂಗಮದೇವ.
Art
Manuscript
Music
Courtesy:
Transliteration
Kālacakra karmacakra nādacakra
binducakra-ī nālku cakrava
sādhisihevemba hiriyarella
keṭṭu hōdaru nōḍā.
Kālacakravu ghrāṇadinda naḍevudu,
karmacakravu nayanadinda naḍevudu,
nādacakravu śrōtradinda naḍevudu,
binducakravu jihveyinde naḍevudu.
Kālacakra gurukṣētra, karmacakra liṅgakṣētra,
nādacakra jaṅgamakṣētra, binducakra prasādakṣētra.
Ī nālkara manada koneya moneya mēle
sinhāsananāgippa nam'ma kūḍalacennasaṅgamadēva.