ಅನಾದಿಕುಳ ಗುರುಸನುಮತವಾದ ಪ್ರಸಾದಿ,
ಲಿಂಗ ಜಂಗಮ ಸನುಮತವಾದ ಪ್ರಸಾದಿ,
ಆಪ್ಯಾಯನ ಅವಧಾನ ಅಂಗವಿಸದೆ
ನಿಂದು ಸನುಮತವಾದ ಪ್ರಸಾದಿ,
ನೇತ್ರ ಶ್ರೋತ್ರ ಘ್ರಾಣ ತ್ವಕ್, ಜಿಹ್ವೆ ಮನ ಬುದ್ಧಿ ಚಿತ್ತಹಂಕಾರ
ಸನುಮತವಾದ ಪ್ರಸಾದಿ,
ರೂಪ ರಸ ಗಂಧ ಶಬ್ದ ಸ್ಪರ್ಶ ಪಂಚೇಂದ್ರಿಯ
ವಿಷಯ ಸನುಮತವಾದ ಪ್ರಸಾದಿ,
ದೇಹಾದಿಗುಣವನತಿಗಳೆದು ಉದರಾಗ್ನಿ ತಲೆದೋರದೆ
ಸಕಲಸನುಮತವಾದ ಪ್ರಸಾದಿ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ,
ಸನ್ಮತವಾಗಿ ಲಿಂಗಲೀಯವಾದ ಪ್ರಸಾದಿ.
Art
Manuscript
Music
Courtesy:
Transliteration
Anādikuḷa gurusanumatavāda prasādi,
liṅga jaṅgama sanumatavāda prasādi,
āpyāyana avadhāna aṅgavisade
nindu sanumatavāda prasādi,
nētra śrōtra ghrāṇa tvak, jihve mana bud'dhi cittahaṅkāra
sanumatavāda prasādi,
rūpa rasa gandha śabda sparśa pan̄cēndriya
viṣaya sanumatavāda prasādi,
dēhādiguṇavanatigaḷedu udarāgni taledōrade
sakalasanumatavāda prasādi.
Idu kāraṇa kūḍalacennasaṅgayyanalli,
sanmatavāgi liṅgalīyavāda prasādi.