Index   ವಚನ - 368    Search  
 
ಗುರುಲಿಂಗ ಶಿವಲಿಂಗ ಜಂಗಮಲಿಂಗ ಈ ತ್ರಿವಿಧ ಒಂದೇ ಎಂದುದಾಗಿ ಒಂದರ ಕಡನ ಒಂದು ತಿದ್ದುವವು. ಗುರು ನಷ್ಟವಾದರೆ ಜಂಗಮ ಗುರುವಲ್ಲದೆ ಭಕ್ತ ಗುರುವಾಗಲಾಗದು. ಪಶು ಪಶುವಿಂಗೆ ಗರ್ಭವಹುದೆ ಬಸವಂಗಲ್ಲದೆ? ಭಕ್ತ ಗುರುವಾದರೆ ಅವನನಾಚಾರಿ, ವ್ರತಗೇಡಿ, ಅವನುನ್ಮತ್ತನು. ಗುರುಶಿಷ್ಯರಿಬ್ಬರು ಕೆಟ್ಟಕೇಡಿಂಗೆ ಕಡೆಯಿಲ್ಲ ಕೂಡಲಚೆನ್ನಸಂಗಮದೇವಾ.