Index   ವಚನ - 370    Search  
 
ಲಿಂಗದಲ್ಲಿ ಸೂತಕವ ಹಿಡಿವನ್ನಕ್ಕ ಪ್ರಾಣಲಿಂಗಸಂಬಂಧಿಯೆಂತೆಂಬೆ? ಜಂಗಮದಲ್ಲಿ ಸೂತಕವ ಹಿಡಿವನ್ನಕ್ಕ ಅನುಭಾವಿಯೆಂತೆಂಬೆ? ಪ್ರಸಾದದಲ್ಲಿ ಸೂತಕವ ಹಿಡಿವನ್ನಕ್ಕ ಸ್ವಾಮಿಭೃತ್ಯ ಸಂಬಂಧಿಯೆಂತೆಂಬೆ? ಭಕ್ತನೆಂತೆಂಬೆ, ಪ್ರಸಾದಿಯೆಂತೆಂಬೆ, ಕೂಡಲ ಚೆನ್ನಸಂಗಯ್ಯನಲ್ಲಿ ಶರಣನೆಂತೆಂಬೆ?