Index   ವಚನ - 372    Search  
 
ವೇದಶಾಸ್ತ್ರ ಪುರಾಣಾಗಮಾದಿಯಾದ ಲಿಂಗವಲ್ಲದಿಲ್ಲೆಂದು ಲಿಂಗಾರ್ಚನೆಯ ಮಾಡುವ ಮಹಾಮಹಿಮರು ನೀವು ಕೇಳಿರೇ. ಅಂಗ ಲಿಂಗವೊ, ಆಚಾರ ಲಿಂಗವೊ, ಅನುಭಾವ ಲಿಂಗವೊ? ಗುರು ಲಿಂಗವೊ, ಜಂಗಮ ಲಿಂಗವೊ? ಪ್ರಸಾದ ಲಿಂಗವೊ, ಪ್ರಾಣ ಲಿಂಗವೊ, ಭಾವ ಲಿಂಗವೊ? "ಪ್ರಾಣಲಿಂಗಸ್ಯ ಸಂಬಂಧೀ ಪ್ರಾಣಲಿಂಗೀ ಪ್ರಕೀರ್ತಿತಃ | ಪ್ರಸನ್ನಲಿಂಗಯುಕ್ತಾತ್ಮಾ ಮಮ ರೂಪೋ ಮಹೇಶ್ವರಿ"|| ಇದು ಕಾರಣ, ಕೂಡಲಚನ್ನಸಂಗಮದೇವಾ ಲಿಂಗನಾಮನಿರ್ಣಯವಪೂರ್ವ.