Index   ವಚನ - 423    Search  
 
ಸೃಷ್ಟಿಯ ಮೇಲಣ ಕಣಿಯ ತಂದು, ಇಷ್ಟಲಿಂಗವೆಂದು ಮಾಡಿ, ಅಷ್ಟತನುವಿನ ಕೈಯಲ್ಲಿ ಕೊಟ್ಟು, ಅಷ್ಟತನುವಿನ ಕೈತಪ್ಪಿ ಸೃಷ್ಟಿಯ ಮೇಲೆ ಬಿದ್ದರೆ ಕೆಟ್ಟನವನನಾಚಾರಿಯೆಂದು ಮುಟ್ಟರು ನೋಡಾ. ಮುಟ್ಟದ ಪ್ರಾಣವ, ಬಿಚ್ಚದ ಭೇದವ ಕಷ್ಟ ಜೀವಿಗಳೆತ್ತ ಬಲ್ಲರು ಕೂಡಲಚೆನ್ನಸಂಗಮದೇವಾ?