Index   ವಚನ - 444    Search  
 
ಲಿಂಗಸ್ಥಲವೆಂಬೆನೆ? ಲಿಂಗಕ್ಕೆ ನೆಲೆಯಿಲ್ಲ. ಜಂಗಮಸ್ಥಲವೆಂಬೆನೆ? ಜಂಗಮಕ್ಕೆ ಜನನವಿಲ್ಲ. ಪ್ರಸಾದಸ್ಥಲವೆಂಬೆನೆ? ಪ್ರಸಾದಕ್ಕೆ ಪರಿಣಾಮವಿಲ್ಲ. ಈ ತ್ರಿವಿಧವೂ ಇಲ್ಲ ಎಂಬೆನೆ? ಕೂಡಲಚೆನ್ನಸಂಗನಲ್ಲಿ ಬಸವಣ್ಣ ಬಲ್ಲ.