Index   ವಚನ - 480    Search  
 
ಎಲ್ಲಾ ಗುಣಂಗಳನೊಲ್ಲೆನೆಂದು ಕಳೆದು, ಪ್ರಾಣಲಿಂಗದಲ್ಲಿ ಪ್ರವೇಶವ ಮಾಡಿದನಯ್ಯಾ. ಆಯತ ಸ್ವಾಯತದಿಂದ ನೋಡಿ ಲಿಂಗಗಂಭೀರ ನಿಸ್ಸಂಗಿ ನೋಡಾ. ಮಾಟ ಕೂಟವೆಂಬ ಭ್ರಾಂತಳಿದಾ ಮನದಲ್ಲಿ ತ್ರಿವಿಧವ ನೆಮ್ಮಿಸಿ. ಸಾಹಿತ್ಯವಾದ ಕೂಡಲಚೆನ್ನಸಂಗಾ ನಿಮ್ಮ ಶರಣ.