Index   ವಚನ - 513    Search  
 
ಮಾತ ಕಲಿತು ಮಂಡೆಯ ಬೋಳಿಸಿಕೊಂಡಡೇನು? ವೇಷಲಾಂಛನಧಾರಿ, ಉದರಪೋಷಕರಪ್ಪರಲ್ಲದೆ ಆಗಮಾಚಾರಿಯರಾಗಲರಿಯರು ಕಾಣಿರೇ. ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಸಲ್ಲದು ಸೀಮೆಯ ಕಲ್ಲು. ಅನ್ಯರ ಬೋಸರಿಸಿ ತನ್ನ ಉದರವ ಹೊರೆವ ವೇಷಡಂಭಕರ ಮೆಚ್ಚ ನಮ್ಮ ಕೂಡಲಚೆನ್ನಸಂಗಮದೇವ.