Index   ವಚನ - 541    Search  
 
ಪ್ರಾಣಲಿಂಗವೆಂದೆಂಬರು, ಪ್ರಾಣನಲ್ಲಿ ಹರಿವ ಪ್ರಕೃತ್ಯಾದಿಗಳಿಗಿನ್ನೆಂತೋ, ಪ್ರಾಣನ, ಪರಮವಾರೂಢನ ನಿರ್ವಾಣದಲ್ಲಿದ್ದಾತನೆ ಬಲ್ಲ, ಪ್ರಾಣಲಿಂಗವಾದಾತನ ನಿಲವುಯೆಂತಿದ್ದಹುದೆಂದರೆ: ನೆಯಿ ಹತ್ತದ ನಾಲಗೆಯಂತೆ, ಕಾಡಿಗೆ ಹತ್ತದಾಲಿಯಂತೆ, ದೂಳು ತಾಗದ ಗಾಳಿಯಂತೆ, ಜಲ ಹತ್ತದ ಜಲಜದಂತೆ, ಉಷ್ಣತಾಗದಗ್ನಿಯಂತಿಪ್ಪ, ಕೂಡಲಚೆನ್ನಸಂಗಾ ನಿಮ್ಮ ಶರಣ.