Index   ವಚನ - 540    Search  
 
ಲಿಂಗೋದಯದ ಅಂಗಸುಖವು, ಅಂಗೋದಯದ ಲಿಂಗಸುಖವು, ಎರಡಿಲ್ಲದ ಘನವನೇನೆಂಬೆನಯ್ಯಾ, ಮಿಕ್ಕುಮೀರಿನಿಂದ ನಿಲವನೇನೆಂಬೆನಯ್ಯಾ. ಕೂಡಲಚೆನ್ನಸಂಗನ ಶರಣನನೇನೆಂಬೆನಯ್ಯಾ.