Index   ವಚನ - 558    Search  
 
ಸ್ಥಲವನರಿದೆನೆಂದರೆ ಕುಳವನರಿಯಬೇಕು. ಕುಳವನರಿದಡೆ ಭ್ರಾಂತು ಸೂತಕವಿಲ್ಲಯ್ಯಾ. ತನುಮನ ಲಯವಾದ ನಿಜೈಕ್ಯನ, 'ಲಿಂಗದೇವಾ' ಎಂದು ಉಪಚರಿಸಲುಂಟೆ? ಆಗಮ ಮುನ್ನವೇ ಹಿಂಗಿತ್ತು, ಆಚಾರ ಮೀರಿತ್ತು. ಕೂಡಲಚೆನ್ನಸಂಗನ ಶರಣ ಸುಚರಂ ಭೋ!