Index   ವಚನ - 560    Search  
 
ದೃಷ್ಟದ ದೃಷ್ಟ ಕಾಣಿರೆ, ಮುಟ್ಟದ ಮುಟ್ಟು ಕಾಣಿರೆ, ಆಗಿನ ಆಗು ಕಾಣಿರೆ, [ಚೇಗ]ದ [ಚೇಗು] ಕಾಣಿರೆ, ಅರಿವಿನ ಅರಿವು ಕಾಣಿರೆ. ಲಿಂಗದಲ್ಲಿ ಹಿಂಗದ ಸಂದು ಕೂಡಲಚೆನ್ನಸಂಗನಲ್ಲಿ ಬಸವಣ್ಣ ಕಾಣಿರೆ.