Index   ವಚನ - 580    Search  
 
ಕಾಸೆ ಕಮಂಡಲ ಉತ್ತಮಾಂಗ ವಿಭೂತಿ ರುದ್ರಾಕ್ಷಿ ಸಹಿತಿದ್ದವರ ಜಂಗಮವೆಂದು ನಂಬುವೆನೆ? ನಂಬೆ ಕಾಣಾ! ಅದೇನು ಕಾರಣ: ಸಾಕಾರದಲ್ಲಿ ಸನುಮತರಲ್ಲ, ಪರಿಣಾಮದಲ್ಲಿ ಪರಿಚಿತರಲ್ಲಾಗಿ. ಇದು ಕಾರಣ ಕೂಡಲಚೆನ್ನಸಂಗನಲ್ಲಿ ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ.