Index   ವಚನ - 601    Search  
 
ಶೀಲ ಸಂಬಂಧವನೆಂತು ಮಾಡುವರಯ್ಯ, ಮನದಂತುವನರಿಯಬಾರದೆ? ಕಾಯದ ಕಳವಳವು ತಮತಮಗೆ ತಟತಟ ತಾಗುತ್ತಿರಲು ಶೀಲ ಶೀಲದಂತೆ, ತಾವು ತಮ್ಮಂತೆ, ಲಿಂಗ ಲಿಂಗದಂತೆ, ಮನದೊಳಗೆ ಎನಗೆ ತನಗೆಂಬ ಭಾವ ಬಿಡದನ್ನಕ್ಕ ಶೀಲ ಮತ್ತೆಲ್ಲಿಯದೊ? ಅಷ್ಟಮದವಳಿದು ಷಡ್ವರ್ಗವರತಡೆ, ಕೂಡಲಚೆನ್ನಸಂಗನಲ್ಲಿ ಸುಶೀಲನೆಂಬೆನು.