Index   ವಚನ - 607    Search  
 
ಭಕ್ತನೆ ಕುಲಜನೆಂಬರು, ಯುಕ್ತಿಯಲ್ಲಿ ವಿಚಾರಿಸರು ನೋಡಾ! ವ್ಯಾಕುಳ ನಿರಾಕುಳವೆಂಬ ಎರಡು ಕುಳ ನೋಡಾ! ವ್ಯಾಕುಳವೆ ಭವ, ನಿರಾಕುಳವೆ ನಿರ್ಭವ. ವ್ಯಾಕುಳವೆ ಪಾಪ, ನಿರಾಕುಳವೆ ಪುಣ್ಯ. ವ್ಯಾಕುಳವೆ ಭವಿ, ನಿರಾಕುಳವೆ ಭಕ್ತ. "ಭವೇ ಬೀಜಂ ತಥಾ ಭಕ್ತಿರ್ಭಕ್ತಿಬೀಜಂ ತಥಾ ಶಿವಃ| ಶಿವಬೀಜಂ ತಥಾ ಜ್ಞಾನಂ ಜ್ಞಾನಂ ತ್ರೈಲೋಕ್ಯ ದುರ್ಲಭಮ್"|| ಎಂಬುದಾಗಿ, ಜ್ಞಾನಿಗೆ ಕತ್ತಲೆಯಿಲ್ಲ, ಅಜಾತಂಗೆ ಹೊಲೆಯಿಲ್ಲ, ಕುಲಾಧೀಶ, ಕೂಡಲಚೆನ್ನಸಂಗಾ.