Index   ವಚನ - 612    Search  
 
ಅಂಗದ ಆಪ್ಯಾಯನವಳಿಯದ ಕಾರಣ ಲಿಂಗ ಲಿಂಗವೆನುತ್ತಿದ್ದರು, ಸಂಗದಾಪ್ಯಾಯನವಳಿಯದ ಕಾರಣ ಜಂಗಮ ಜಂಗಮವೆನ್ನುತ್ತಿದ್ದರು, ಪರಿಣಾಮ ನೆಲೆಗೊಳ್ಳದ ಕಾರಣ ಪ್ರಸಾದ ಪ್ರಸಾದವೆನ್ನುತ್ತಿದ್ದರು. ಒಂದೊಂದರಂಗವಿಡಿದು ನಾಮಭಂಗಿತರಾದರೆಲ್ಲ. ಕೂಡಲಚೆನ್ನಸಂಗಾ ನಿಮ್ಮ ಶರಣ ಅಂಗವಿರಹಿತ.