Index   ವಚನ - 696    Search  
 
ಕರ್ತೃತ್ವವಿಲ್ಲಾಗಿ ಕರ್ಮವಿಲ್ಲ, ಕರ್ಮವಿಲ್ಲಾಗಿ ಜನನವಿಲ್ಲ, ಜನನವಿಲ್ಲಾಗಿ ದೇಹವಿಲ್ಲ, ದೇಹವಿಲ್ಲಾಗಿ ಭೂತಾತ್ಮ ಪವಿತ್ರ. ಕರಣಾದಿ ಗುಣಂಗಳು ಮುನ್ನಿಲ್ಲ, ಹಿಂದಣ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ, ಆದಿ ಮಧ್ಯ ಅವಸಾನವಿಲ್ಲ, ಬಿಚ್ಚಿ ಬೇರಿಲ್ಲ, ಬೆರಸಿವೊಂದಿಲ್ಲ, ಉಪಮಾತೀತನೆಂಬೆ. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನು ನುಡಿಗಡಣವಿಲ್ಲದ ಮುಗ್ಧನು.