Index   ವಚನ - 715    Search  
 
ಕಾಯದಲ್ಲಿ ಲಿಂಗೈಕ್ಯವೇ? ಅಲ್ಲ. ಜೀವದಲ್ಲಿ ಲಿಂಗೈಕ್ಯವೇ? ಅಲ್ಲ. ಭಾವದಲ್ಲಿ ಲಿಂಗೈಕ್ಯವೇ? ಅಲ್ಲ. ಇಂತೀ ತ್ರಿವಿಧ ಲಿಂಗೈಕ್ಯವೇ? ಅಲ್ಲ. ಮತ್ತೆಯೂ ಲಿಂಗೈಕ್ಯವೇ ಬೇಕು, ಕೂಡಲಚೆನ್ನಸಂಗಮದೇವಾ.