Index   ವಚನ - 755    Search  
 
ಅಂಗ ಲಿಂಗೈಕ್ಯವೆಂದರೆ ಸಂಸಾರಕ್ಕೊಳಗಾಯಿತ್ತು, ಮನ ಲಿಂಗೈಕ್ಯವೆಂದರೆ ಬಂಧನಕ್ಕೊಳಗಾಯಿತ್ತು, ಪ್ರಾಣ ಲಿಂಗೈಕ್ಯವೆಂದರೆ ಭವಕ್ಕೊಳಗಾಯಿತ್ತು. ಇದಾವಂಗವೆನಲಿಲ್ಲ, ಕೂಡಲಚೆನ್ನಸಂಗಾ ಲಿಂಗೈಕ್ಯ.