Index   ವಚನ - 784    Search  
 
ಭವಿಗೆ ಹುಟ್ಟಿದ ಭಕ್ತ, ಭಕ್ತಗೆ ಹುಟ್ಟಿದ ಪ್ರಸಾದ, ಪ್ರಸಾದಕ್ಕೆ ಹುಟ್ಟಿದ ಅರ್ಪಿತ, ಅರ್ಪಿತಕ್ಕೆ ಹುಟ್ಟಿದ ಆರೂಢ. ಆರೂಢಕ್ಕೆ ಹುಟ್ಟಿದ ಆಚಾರ, ಆಚಾರಕ್ಕೆ ಹುಟ್ಟಿದ ಆಗಮ- ಕ್ರಿಯಾಜ್ಞಾನಸಂಪಾದನೆಯ ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.