Index   ವಚನ - 853    Search  
 
ಅರಿವಿಂದಲಾದ ಮರಹಿನ ಶಬ್ದವನರಿಯಲಾಗದು, ಅರಿದಡದಕ್ಕೆ ಭವವು, ಅರಿವರತು ಮರಹು ನಷ್ಟವಾಗಿ ಜ್ಞಾನ ಬೆಂದಲ್ಲಿ ನಿರ್ಣಯವೆಲ್ಲಿಯದು? ಜ್ಞಾನದೊಳಗಣ ಬುದ್ಧಿಯ ಭಸ್ಮವಾಗಿ ಧರಿಸಿದಲ್ಲಿ ಕೂಡಲಚೆನ್ನಸಂಗಮದೇವರು ಸರ್ವನಿವಾಸಿ.