Index   ವಚನ - 855    Search  
 
ಜಗಭರಿತನೆನ್ನ ದೇವ, ಜಗವ ಹೊದ್ದನೆನ್ನ ದೇವ. ಭಕ್ತನ ಕರಸ್ಥಲಕ್ಕೆ ಬಂದನೆನ್ನ ದೇವ, ಭಕ್ತನನವಗ್ರಹಿಸಿಕೊಂಡನಾಗಿ ಎನ್ನ ದೇವ. "ಓಂ ನಮೋ ಮಹದ್ಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮಃ ಆಸೀನೇಭ್ಯಃ ಯಜಾಮ ದೇವಾನ್ಯದಿಶಕ್ನವಾಮ ಮಮಾಜ್ಯಾಯಸಃ ತಂ ಸಮಾವೃಕ್ಷಿ ದೇವಾ'' ಎಂದುದಾಗಿ ಎನ್ನ ದೇವ. ಇದು ಕಾರಣ, ಕೂಡಲಚೆನ್ನಸಂಗಮದೇವರು ಅಕ್ಷರಾಕ್ಷರವ ಮೀರಿದ ಘನವು.