Index   ವಚನ - 859    Search  
 
ಸಹಜವೆನ್ನದೆ, ನಿಜವೆನ್ನದೆ, ಅಚಳವೆನ್ನದೆ, ಶೂನ್ಯವೆನ್ನದೆ, ಅಖಂಡಿತ ಪರಿಪೂರ್ಣವೆನ್ನದೆ, ಏನೂ ಎನ್ನದೆ, ಕೂಡಲಚೆನ್ನಸಂಗಾ ಲಿಂಗೈಕ್ಯವು.