Index   ವಚನ - 914    Search  
 
ಅಘಟಿತ ಘಟಿತವೆಂಬ ಮಹಾಘನವ ಸಾಧಿಸುವಡೆ, ಮಡಿವಾಳನ ಕೃಪೆಯಿಲ್ಲದನ್ನಕ್ಕರ, ಎಂತರಿಯಬಪ್ಪುದು ನಿಜಲಿಂಗೈಕ್ಯವನು? ಎನ್ನ ಆರೂಢಿಯ ಅರಿವಿಂಗೆ ನೀನೆ ಶೃಂಗಾರ. ಕೂಡಲಚೆನ್ನಸಂಗಮದೇವರಲ್ಲಿ ಮಡಿವಾಳನ ಕೈಯ ಸ್ವಾಯತವಾದೆನು ಕಾಣಾ ಪ್ರಭುವೆ.