ಅಡಿಪಾದದಿಂದ ಮೂರು ವೇಳೆ ಸ್ಪರ್ಶನವ
ಮಾಡಿಕೊಳ್ಳುವುದು ಧೂಳಪಾದೋದಕ,
ಅದೇ ದೀಕ್ಷಾಪಾದೋದಕವೆನಿಸುವುದು.
ಅದರಿಂದ ಸ್ನಾನ ಮುಖಪ್ರಕ್ಷಾಲನ
ಅಭಿಷೇಕವ ಮಾಡಿಕೊಂಬುದು.
"ಜಂಗಮಾನಾಂ ಚ ಪಾದೋದಂ
ಪಾನೀಯಂ ಚ ಕದಾಚನ
ಸ್ನಾತವ್ಯಂ ಮೂರ್ಧ್ನಿ ಧರ್ತವ್ಯಂ ಪ್ರೋಕ್ಷಿತವ್ಯಂ ಸ್ವದೇಹಕೇ''
ಎಂದುದಾಗಿ,
ಈ ರೀತಿಯಲ್ಲಿ ನಡೆಯಬಲ್ಲಡೆ
ಆತನೆ ಅಚ್ಚಶರಣನೆಂಬೆ ಕೂಡಲಚೆನ್ನಸಂಗಮದೇವಾ.