Index   ವಚನ - 1146    Search  
 
ಕಾಲ ಕಲ್ಪಿತನಲ್ಲ ಕರ್ಮವಿರಹಿತ ಶರಣ. ವಿಧಿ ನಿಷೇಧ, ಪುಣ್ಯ-ಪಾಪ, ಕರ್ಮ-ಕಾಯನು ಅಲ್ಲ ಆ ಶರಣನು. ಅವರಿವರ ಬೆರಸಿಪ್ಪನು, ತನ್ನ ಪರಿ ಬೇರೆ! ನಿರಂತರ ಸುಖಿ, ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣರು ಪ್ರಪಂಚನೊಳಗಿದ್ದೂ, ತನ್ನ ಪರಿ ಬೇರೆ.