Index   ವಚನ - 1156    Search  
 
ಕೃತಯುಗದಲ್ಲಿ ಓಂಕಾರಸತ್ಯರೂಪ ದೇವಾಂಗನೆಂಬ ಭಕ್ತನ ಮಾಡುವಲ್ಲಿ ಸ್ಥೂಲಕಾಯನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಕೇತಾರೇಶ್ವರ. ತ್ರೇತಾಯುಗದಲ್ಲಿ ಘಂಟಾಕರ್ಣನೆಂಬ ಭಕ್ತನ ಮಾಡುವಲ್ಲಿ ಶೂನ್ಯಕಾಯನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ರಾಮೇಶ್ವರ. ದ್ವಾಪರದಲ್ಲಿ ವೃಷಭನೆಂಬ ಭಕ್ತನ ಮಾಡುವಲ್ಲಿ ಅನಿಮಿಷನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಸೌರಾಷ್ಟ್ರ. ಕಲಿಯುಗದಲ್ಲಿ ಬಸವನೆಂಬ ಭಕ್ತನ ಮಾಡುವಲ್ಲಿ ಪ್ರಭುವೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಶ್ರೀಶೈಲ. ಇಂತೀ ನಾಲ್ಕು ಯುಗಕ್ಕೆ ನಾಲ್ಕು ಜಂಗಮಸ್ಥಲ, ನಾಲ್ಕು ಯುಗಕ್ಕೆ ನಾಲ್ಕು ಲಿಂಗ ಸ್ಥಲ ಕೂಡಲಚೆನ್ನಸಂಗಮದೇವಾ.