ಗುರುವ ಭವಿಯೆಂಬೆ, ಲಿಂಗವ ಭವಿಯೆಂಬೆ,
ಜಂಗಮವ ಭವಿಯೆಂಬೆ, ಪ್ರಸಾದವ ಭವಿಯೆಂಬೆ.
ಅದೇನು ಕಾರಣವೆಂದರೆ;
ಇವಕ್ಕೆ ಉಪದೇಶವ ಕೊಟ್ಟವರಿಲ್ಲವಾಗಿ,
ಇವಕ್ಕೆ ಸಾಮಿಪ್ಯ ಸಂಬಂಧವಿಲ್ಲಾಗಿ.
ಅದೆಂತೆಂದಡೆ:
`ನಾಸ್ತಿ ತತ್ತ್ವಂ ಗುರೋಃ ಪರಮ್' ಎಂಬುದಾಗಿ.
ಅದಕ್ಕೆ ಮತ್ತೆಯೂ;
"ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ|
ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ||
ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ|
ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ"|| ಎಂಬುದಾಗಿ.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಭವಿಯಾಗಿ
ಭವಿಯ ಬೆರಸಬೇಕು.
Art
Manuscript
Music
Courtesy:
Transliteration
Guruva bhaviyembe, liṅgava bhaviyembe,
jaṅgamava bhaviyembe, prasādava bhaviyembe.
Adēnu kāraṇavendare;
ivakke upadēśava koṭṭavarillavāgi,
ivakke sāmipya sambandhavillāgi.
Adentendaḍe:
`Nāsti tattvaṁ gurōḥ param' embudāgi.
Adakke matteyū;
tvaṁ viśvakartā tava nāsti kartā|
tvaṁ viśvabhartā tava nāsti bhartā||
tvaṁ viśvahartā tava nāsti hartā|
tvaṁ viśvanāthastava nāsti nāthaḥ|| embudāgi.
Idu kāraṇa, kūḍalacennasaṅgayyanalli bhaviyāgi
bhaviya berasabēku.