Index   ವಚನ - 1228    Search  
 
ಗುರುಹಸ್ತದೊಳು ಪುನರ್ಜಾತನಾದ ಭಕ್ತನಲ್ಲಿ ಆವ ಜನ್ಮಜಾತಿಯ ಬೆದಕಲಪ್ಪುದು? ಅವೆಲ್ಲ ಪ್ರಾಕೃತರಿಗಲ್ಲದೆ ಅಪ್ರಾಕೃತರಿಗುಂಟೆ ಹೇಳಾ? "ಅಪ್ರಾಕೃತಸ್ಯ ಭಕ್ತಸ್ಯ ಗುರುಹಸ್ತಾಮಲಾಂಬುಜಾತ್| ಪುನರ್ಜಾತಸ್ಯಾತ್ಮಜನ್ಮ ಜಾತ್ಯಾದೀನ್ನ ಚ ಕಲ್ಪಯೇತ್"|| ಎಂಬ ಆಗಮವನರಿಯದೆ, ನಿಮ್ಮ ಶರಣರಲ್ಲಿ ಜಾತಿಯ ಹುಡುಕುವ ಕಡುಪಾತಕಿಗಳ ಎನ್ನತ್ತ ತೋರದಿರಯ್ಯಾ ಕೂಡಲಚೆನ್ನಸಂಗಮದೇವಾ.