Index   ವಚನ - 1232    Search  
 
ಘಟನಾಘಟನಸಮರ್ಥನಪ್ಪ ಶ್ರೀಗುರುವಿನ ಪ್ರಸಾದದಿಂದಲ್ಲದೆ, ಮಾಯೆಗೆ ಮರುಳಾದ ನರಜೀವಿಗಳ ಬಹಿರಂಗದ ಬರಿಯ ಸಂಸ್ಕಾರ ಮಾತ್ರದಿಂದ ಭವಿ ಭಕ್ತನಪ್ಪನೆ? ಸೊಡ್ಡಳದೇವನ ಶುಭವಪ್ಪ ನೋಟದಿಂದ ಇಟ್ಟಿಯ ಹಣ್ಣುಗಳು ಸಿಹಿಯಾದುವಲ್ಲದೆ, ಲೋಕದ ಕಾಕುಮಾನವರ ನೋಟಮಾಟದಿಂದ ಸಿಹಿಯಾದುವೆ? ಅದು ಕಾರಣ- ಅಂತಪ್ಪ ಸಾಮರ್ಥ್ಯವಿಲ್ಲದೆ ಕಡುಪಾತಕಿಗಳ ಹಿಡಿದು ತಂದು, ಲಿಂಗವ ಕೊಡಲು ಕಡೆತನಕ ಭವಿಗಳಾಗಿರ್ಪರಲ್ಲದೆ ಭಕ್ತರಾಗಲರಿಯರಯ್ಯಾ ಕೂಡಲಚೆನ್ನಸಂಗಯ್ಯಾ.