Index   ವಚನ - 1278    Search  
 
ತನ್ನ ಹೊದ್ದದಂತೆ ಮಾಡಿದ, ತನ್ನ ಸಾರದಂತೆ ಮಾಡಿದ. ಕಾಮವ ತಂದು ಕಣ್ಣಿಗೆ ತೋರಿದನು, ವಿಧಿಯ ತಂದು ಮುಂದೊಡ್ಡಿದನು ನೋಡಯ್ಯಾ. ಪ್ರಸಾದಸಾಧಕರಿಗೆ ಇದೇ ವಿಘ್ನವಯ್ಯಾ. ಕೂಡಲಚೆನ್ನಸಂಗಮದೇವಯ್ಯ ತನ್ನ ಹೊದ್ದದಂತೆ ಮಾಡಿದನಯ್ಯಾ.