ತನು ಗುರುವಿನಲ್ಲಿ ಸವೆದು,
ಮನ ಲಿಂಗದಲ್ಲಿ ಸವೆದು,
ಧನ ಜಂಗಮದಲ್ಲಿ ಸವೆದು,
ತನುವೆ ಗುರುವಾಗಿ, ಮನವೆ ಲಿಂಗವಾಗಿ,
ಧನವೆ ಜಂಗಮವಾಗಿ-
ಇಂತೀ ತ್ರಿವಿಧ ಐಕ್ಯವಾಗಿ ನಿಮ್ಮಲ್ಲಿ ನಿಂದನಾಗಿ,
ಕಾಯವಿಡಿದು ಕರ್ಮವಿರಹಿತನಾದ,
ಕೂಡಲಚೆನ್ನಸಂಗಮದೇವರಲ್ಲಿ
ಸಂಗನಬಸವಣ್ಣನು ಉಪಮಾತೀತನಾಗಿರ್ದನು.
Art
Manuscript
Music
Courtesy:
Transliteration
Tanu guruvinalli savedu,
mana liṅgadalli savedu,
dhana jaṅgamadalli savedu,
tanuve guruvāgi, manave liṅgavāgi,
dhanave jaṅgamavāgi-
intī trividha aikyavāgi nim'malli nindanāgi,
kāyaviḍidu karmavirahitanāda,
kūḍalacennasaṅgamadēvaralli
saṅganabasavaṇṇanu upamātītanāgirdanu.