Index   ವಚನ - 1292    Search  
 
ತನುಸ್ವಾಯತವಾದವರಂಗ ಸ್ಥಾವರದಂತಿಪ್ಪುದು, ಮನಸ್ವಾಯತವಾದವರಂಗ ಜ್ಯೋತಿರ್ಮಯಲಿಂಗದಂತಿಪ್ಪುದು, ಶಬ್ದಸ್ವಾಯತವಾದವರಂಗ ಪೃಥ್ವಿಯಂತಿಪ್ಪದು. ಇಂತೀ ತ್ರಿವಿಧಸ್ವಾಯತರಾದವರಂಗ ಜಂಗಮಲಿಂಗವೆಂಬೆ ಕಾಣಾ, ಕೂಡಲಚೆನ್ನಸಂಗಮದೇವಾ.