Index   ವಚನ - 1317    Search  
 
ಧೀರಸಂಪನ್ನರೆಲ್ಲ ಅಲಗಿನ ಮೊನೆಗೆ ಭಾಜನವಾದರು ನೋಡಯ್ಯಾ! ಧನಸಂಪನ್ನರೆಲ್ಲ ರಾಜರಿಗೆ ಭಾಜನವಾದರು ನೋಡಯ್ಯಾ! ರೂಪಸಂಪನ್ನರೆಲ್ಲ ಸ್ತ್ರೀಯರಿಗೆ ಭಾಜನವಾದರು ನೋಡಯ್ಯಾ! ಗುಣಸಂಪನ್ನರೆಲ್ಲ ಬಂಧುಗಳಿಗೆ ಭಾಜನವಾದರು ನೋಡಯ್ಯಾ! ಜ್ಞಾನಸಂಪನ್ನರೆಲ್ಲ ಬಸವಣ್ಣ ಲಿಂಗಕ್ಕೆ ಭಾಜನವಾದ ನೋಡಯ್ಯಾ, ಕೂಡಲಚೆನ್ನಸಂಗಮದೇವಾ.