Index   ವಚನ - 1319    Search  
 
ʼನ' ಕಾರವೆ ಬಸವಣ್ಣನ ನಾಸಿಕ, `ಮ' ಕಾರವೆ ಬಸವಣ್ಣನ ಜಿಹ್ವೆ, `ಶಿ' ಕಾರವೆ ಬಸವಣ್ಣನ ನಯನ, `ವ' ಕಾರವೆ ಬಸವಣ್ಣನ ತ್ವಕ್ಕು, `ಯ' ಕಾರವೆ ಬಸವಣ್ಣನ ಶ್ರೋತ್ರ, `ಓಂ' ಕಾರವೆ ಬಸವಣ್ಣನ ಪ್ರಾಣ, ʼಅ`ಕಾರವೆ ಬಸವಣ್ಣನ ನಾದ, `ಉ' ಕಾರವೆ ಬಸವಣ್ಣನ ಬಿಂದು, `ಮʼ ಕಾರವೆ ಬಸವಣ್ಣನ ಕಳೆ- ಇಂತೀ ಮೂರು ಪ್ರಣವಂಗಳೆ ಪ್ರಣವದ ಶಿರಸ್ಸಾಗಿ, ಪ್ರಣವದ ಕುಂಡಲಿ ಸೋಂಕಿ ಶಾಖೆಗಳಾಗಿಪ್ಪುವು, `ಬ' ಕಾರವೆ ಭವಹರ ಗುರು, `ಸ' ಕಾರವೆ ಸಕಲಚೈತನ್ಯಲಿಂಗ, `ವ' ಕಾರವೆ ವಚಿಸುವ ಜಂಗಮ- ಇಂತೀ ಮೂರು ಪ್ರಣವಂಗಳೆ ಪ್ರಣವದ ಮೂರು ಪದಂಗಳಾಗಿ ಪ್ರಣವಕ್ಕೆ ಮೂಲಪದಂಗಳಾಗಿಪ್ಪುವು. ಇಂತೀ ಹನ್ನೆರಡು ಪ್ರಣವ ತಾನೆಯಾದ ಕೂಡಲಚೆನ್ನಸಂಗಯ್ಯನಲ್ಲಿ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.