Index   ವಚನ - 1339    Search  
 
ನಿಜವೆಲ್ಲ ತಾನಾಗಿ, ನಾನೆಲ್ಲ ನಿಜವಾಗಿ, ಒಡಲುಪಾಧಿಯೆಂಬುದಿಲ್ಲ ನೋಡಾ, ನಿಂದಡೆ ನೆಳಲಿಲ್ಲ, ನೆಡೆದಡೆ ಹೆಜ್ಜೆಯಿಲ್ಲ, ಅಪರಿಮಿತ ಘನಮಹಿಮನನೇನೆಂಬೆನಯ್ಯಾ! ಶಬ್ದವರಿದು ಸಾರಾಯನಲ್ಲ, ಗತಿವಿಡಿದು ಜಡನಲ್ಲ, ಎರಡಳಿದುಳಿದ ನಿಶ್ಚಿಂತನು! ತನಗೆ ತಾ ನಿಜವಾದ ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುದೇವರೆಂಬ ಜಂಗಮದ ಪಾದಕ್ಕೆ ನಮೋ ನಮೋ ಎನುತಿರ್ದೆನು.