Index   ವಚನ - 1401    Search  
 
ಪ್ರಥಮಸ್ಥಲ ಸೂತಕದಲ್ಲಿ ಹೊಲೆ, ದ್ವಿತೀಯಸ್ಥಲ ಜನನದಲ್ಲಿ ಹೊಲೆ, ತೃತೀಯಸ್ಥಲ ಮರಣದಲ್ಲಿ ಹೊಲೆ, ಇಂತೀ ಹೊಲೆಯ ತನ್ನೊಳಗೆ ಇಂಬಿಟ್ಟು ಮುಂದಿನವರ ಹೊಲೆಯನರಸುವ ಅನ್ಯಾಯಿಗಳ ಮಾತ ಕೇಳಲಾಗದು, ಕೇಳಲಾಗದು ಕಾಣಾ, ಕೂಡಲಚೆನ್ನಸಂಗಮದೇವಾ.