Index   ವಚನ - 1403    Search  
 
ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡು ಮಾತನಾಡುವುದು ನೀವೆಲ್ಲ ಕೇಳಿರೇ, ಗುರುಮುಖದಲರ್ಪಿತ ಮಾಡಲರಿಯರು, ಲಿಂಗಮುಖದಲರ್ಪಿತ ಮಾಡಲರಿಯರು, ತಾವೇ ಗುರುವೆಂದು ಪ್ರಸಾದವನಿಕ್ಕುವರಯ್ಯಾ, ತಾವೇ ಲಿಂಗವೆಂದು ಪ್ರಸಾದವನಿಕ್ಕುವರಯ್ಯಾ, ಜಂಗಮಮುಖದಲರ್ಪಿತವ ಮಾಡಲರಿಯರು, ತಾವೇ ಜಂಗಮವೆಂದು ಪ್ರಸಾದವನಿಕ್ಕುವರಯ್ಯಾ, ಸರ್ವಮುಖದಲಿ ಲಿಂಗಾರ್ಪಿತ ಮಾಡಲರಿಯರು, ತಾವೇ ಸರ್ವಮುಖಲಿಂಗವೆಂದು ಪ್ರಸಾದವನಿಕ್ಕುವರಯ್ಯಾ, .................... ಲೋಗರಿಗಿಕ್ಕುವ ಭಂಡರನೇನೆಂಬೆನಯ್ಯಾ?