Index   ವಚನ - 1429    Search  
 
ಬಾಯಿಗೆ ಬಂದಂತೆ ಬಗುಳಾ[ಡಿ], ಹಸಿದಾಗ ಲಿಂಗಕ್ಕೆ ಸಿತಾಳಪತ್ರೆಯಂ ಕೊಟ್ಟು, ವಿಭೂತಿಯನಿಟ್ಟು, ರುದ್ರಾಕ್ಷಿಯ ತೊಟ್ಟು, ಕಂಥೆ ಬೊಂತೆಯ ಧರಿಸಿ, ಪರನಿಂದೆಯಂ ಮಾಡಿ, ರುದ್ರನ ಮನೆಯ ಛತ್ರದಲುಂಡುಂಡು ಕೆಡೆವಾತನು ವೇಶಿಯ ಪುತ್ರ ಕಾಣಾ, ಕೂಡಲಚೆನ್ನಸಂಗಮದೇವಾ.