Index   ವಚನ - 1444    Search  
 
ಭಕ್ತಂಗೆ ಪೃಥ್ವಿಯೆ ಅಂಗ, ಆ ಅಂಗಕ್ಕೆ ಸುಚಿತ್ತವೆ ಹಸ್ತ, ಆ ಹಸ್ತಕ್ಕೆ ಕರ್ಮಸಾದಾಖ್ಯ, ಆ ಸಾದಾಖ್ಯಕ್ಕೆ ಕ್ರಿಯಾಶಕ್ತಿ, ಆ ಶಕ್ತಿಗೆ ಆಚಾರವೆ ಲಿಂಗ, ಆ ಲಿಂಗಕ್ಕೆ ನಿವೃತ್ತಿಯೆ ಕಲೆ, ಆ ಕಲೆಗೆ ಘ್ರಾಣೇಂದ್ರಿಯವೆ ಮುಖ, ಆ ಮುಖಕ್ಕೆ ಸುಪರಿಮಳದ್ರವ್ಯಂಗಳನು ರುಚಿತೃಪ್ತಿಯನರಿದು ಸದ್ಭಕ್ತಿಯಿಂದರ್ಪಿಸಿ, ಸುಗಂಧಪ್ರಸಾದವ ಭೋಗಿಸಿ ಸುಖಿಸುತ್ತಿಹನು ಕೂಡಲಚೆನ್ನಸಂಗಾ, ನಿಮ್ಮ ಭಕ್ತನು.