Index   ವಚನ - 1479    Search  
 
ಭಾಜನ ಸಹಿತ ಭೋಜನವ ಮಾಡುವನೆ ಶರಣನು? ಭೋಜನ ಸಹಿತ ಭಾಜನವ ಮಾಡುವ, ಭಾಜನ ಬೋಜನವು ಸಹಭೋಜನದ ಪ್ರಸಾದ ಈ ನಿಲವ ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣಂಗಲ್ಲದೆ ಮಿಕ್ಕಿನ ಅಜ್ಞಾನಿಗಳೆತ್ತ ಬಲ್ಲರಯ್ಯಾ.